Pages

Sunday 21 February 2010

ಗೆಳೆತನ


ಒಬ್ಬ ಹುಡುಗನಿಗೆ ತಾನು ಇನ್ನೇನು ಹತ್ತೇ ನಿಮಿಷದಲ್ಲಿ ಸಾಯಲಿದ್ದೇನೆ ಅಂತ ಗೊತ್ತಾಗಿಬಿಟ್ಟಿದೆ, ಆದರೆ ಅವನ ಜೊತೆಯಲ್ಲಿ ಯಾರು ಇಲ್ಲ.
ಅವನು ತನ್ನ ಬ್ಲಾಕ್ಕ್ಬೇರಿ ಫೋನ್ ತೆಗೆದುಕೊಂಡು ತನ್ನೆಲ್ಲ ಫ್ರೆಂಡ್ಸ್ಗೆ, ಪ್ರಿಯತಮೆಗೆ ಮೆಸೇಜ್ ಮಾಡ್ತಾನೆ.........."ಗುಡ್ ಬೈ"
ನೆಕ್ಷ್ತ ಎರಡೇ ನಿಮಿಷಗಳಲ್ಲಿ ಅವನ ಪ್ರಿಯತಮೇಯಿಂದ ಸಂದೇಶ ಬರುತ್ತದೆ.....
"ಎಲ್ಲಿಗ್ ಹೋಗ್ತಾ ಇದಿಯ ಡಿಯರ್, ನಾನು ಕೆಲಸದಲ್ಲಿ ಬಹಳ ಬ್ಯುಸಿ ಆಗಿದಿನಿ ಮೇಲಿಂದ ನನ್ ಬಾಸ್ ಬೆರೆ ಒತ್ತಡದಲ್ಲಿದಾರೆ.
ನನಗೆ ಬರಲು ಸಾದ್ಯಾನೆ ಇಲ್ಲ , ನನ್ನನ್ನು ಬಿಟ್ಟು ನೀನೊಬ್ಬನೇ ಹೋಗು"
ಇದನ್ನು ಕೇಳಿದ ಹುಡುಗನ ಹೃದಯ ವಿಲವಿಲನೆ ಒದ್ದಾಡಿತು............ಕಣ್ಣೀರಿಟ್ಟಿತು.......
ಇದೆ ದುಖದಲ್ಲಿ ಅವನಿಗೆ ತನ್ನ ಕೈನಲ್ಲಿರುವ ಫೋನನ್ನು ಬೀಸಿ ಒಗೆಯಬೇಕು ಅಂತ ಅನಿಸುತ್ತೆ....
ಅಸ್ಟರಲ್ಲೇ ಅದು ತನ್ನ ಮಾಮೂಲಿ ನೀಲಿ ಬೆಳಕನ್ನ ಚೆಲ್ಲಿ ಎರಡು ಸಲ ಬೀಪ್.........ಬೀಪ್........ಎಂದು ಅಲ್ಲಾಡುತ್ತದೆ.
ಹುಡುಗ ತುಂಬಾ ಕುತೂಹಲದಿಂದ ಮೆಸ್ಸಜನ್ನ ಓದುತ್ತಾನೆ...........ಅವನ ಕ್ಲೋಸ್ ಫ್ರೆಂಡ್ ಮೆಸೇಜ್ ಮಾಡಿರುತ್ತಾನೆ.
ಅಸ್ಟರಲ್ಲೇ ಫೋನ್ ಮತ್ತೆ ಮತ್ತೆ ಬೀಪ್....ಬೀಪ್.......ಬೀಪ್.....ಬೀಪ್.......ಶಬ್ದ ಮಾಡಿತು.
ಅವನ ಗೆಳೆಯರೆಲ್ಲ ಅವನಿಗೆ ಮೆಸೇಜ್ ಮಾಡಿರುತ್ತಾರೆ......................

"ಏನೋ ಲೋಫರ್......ನನ್ಬಿಟ್ಟು ನಿನೊಬ್ನೆ ಎಲ್ಲಿಗೋ ಹೋಗ್ತಿಯ ಸ್ಟುಪಿಡ್........
ಇರೋ ನಾನೂ ಬರ್ತೀನಿ........................."

ಹುಡುಗನ ತುಟಿಯಂಚಿನಲ್ಲಿ ಕಿರುನಗುವೊಂದು ಸುಳಿಯಿತು.
ಮನದುಂಬಿ ಕಣ್ಣಂಚಿನಿಂದ ಎರಡು ಹನಿ ಜಾರಿತು......

ಇದೆ ಗೆಳೆತನವೆಂಬ ಸಂಬಂಧ.ಗೆಳೆಯರಿಲ್ಲದ ಜೀವನ ಬರಡು ಭೂಮಿಯಂತೆ.
Share/Save/Bookmark

Friday 19 February 2010

ಅಂತರಂಗದ ಮಿಡಿತ


















ನಿನ್ನ ನೋಡಿದ ಆ ಕ್ಷಣ,
ಕಣ್ಣಂಚಿನ ಮಿಂಚಿನಲಿ ಮರೆತೆ ನಾ ನನ್ನ.
ಬಿದಿಗೆ ಚಂದ್ರಮನಂತಿದ್ದ ನಿನ್ನ ಮೊಗ,
ಸಿಹಿ ಜೇನಿಂದ ತುಂಬಿಕೊಂಡ ನಿನ್ನ ತುಟಿ
ಬೇಡವೆಂದರೂ ಕೆನ್ನೆಗೆ ಮುತ್ತಿಡುವ ಮುಂಗುರುಳು
ನನ್ನ ಹೃದಯವನ್ನು ಎಲ್ಲಿಗೋ ಸೆಳೆಯುತ್ತಿದೆ.
ಮುಂಜಾನೆಯ ಕನಸಿನಲ್ಲಿ
ಮುಸ್ಸಂಜೆಯ ಮುನಿಸಿನಲ್ಲಿ
ನೀನೆ ತುಂಬಿರುವೆ.
ಮನಸ್ಸಿನ ಈ ತುಡಿತ
ಹೃದಯದ ಈ ಮಿಡಿತ
ನಿನಗಾಗಿ ನಿನ್ನ ಪ್ರೀತಿಗಾಗಿ
ನಿನ್ನ ಒಂದು ಮಾತಿಗಾಗಿ
ಬೊಗಸೆಯಷ್ಟು ಪ್ರೀತಿಗಾಗಿ
ಕಾಯುತಿದೆ ನನ್ನೀ ಮನ.
ನಿನ್ನ ಒಂದು ಮಾತು ಸಾಕು
ನನ್ನ ಮನವು ಅರಳಲು.
ನಿನ್ನ ಒಂದು ನೋಟ ಸಾಕು
ನನ್ನ ಬದುಕು ಬೆಳಗಲು.
ನನ್ನ ಹೃದಯದ ತುಂಬೆಲ್ಲ
ನೀನೆ ತುಂಬಿರುವೆ
ನೀನಿಲ್ಲದ ಈ ಬದುಕು
ಬರೀ ಶೂನ್ಯ......

-ಕಾವ್ಯ ಹೆಗಡೆ
Share/Save/Bookmark

Wednesday 17 February 2010

ಗೂಗಲ್‌ನಲ್ಲೇನೋ ‘ಬಝ್’ಗುಡುತ್ತಿದೆ..... ???

ಮೊನ್ನೆ ಮೊನ್ನೆ ತಮ್ಮ ಜಿ-ಮೇಲ್ ಖಾತೆ ತೆರೆದು ಒಳಗೆ ಪ್ರವೇಶಿಸಿದವರಿಗೆ ಆಶ್ಚರ್ಯ ಕಾದಿತ್ತು. ‘ಬಝ್’ (Buzz) ಎನ್ನುವ ಹೊಸ ಸೇವೆಯೊಂದು ಇನ್‌ಬಾಕ್ಸ್‌ನ ಕೆಳಗಡೆ ಕುಳಿತು ಒಂದೇ ಸಮನೆ ಬಝ್ ಗುಡುತ್ತಿತ್ತು. ಏನಿದು ಬಝ್ ಅಂತೀರಾ? ಅದೇ, ಟ್ವಿಟರ್, ಫೇಸ್‌ಬುಕ್ ಇದೆಯಲ್ಲಾ? ಥೇಟ್ ಅಂತದ್ದೇ. ಸಂಕ್ಷಿಪ್ತ ಸಂದೇಶ ಅಭಿವ್ಯಕ್ತಿ.

ಕ್ಷಣ ಕ್ಷಣದ ಆಲೋಚನೆಗಳನ್ನು ಬರೆದು ಜಗಜ್ಜಾಹೀರು ಮಾಡುವ ಜಾಗ. ಗುಂಡಿಗೆ ಗಟ್ಟಿ ಇದ್ದರೆ ಯಾರು ಬೇಕಾದರೂ ‘ಬಝ್’ನಲ್ಲಿ ಏನು ಬೇಕಾದರೂ ಬರೆದು ಬಯಲು ಮಾಡಬಹುದು.

‘ಬಝ್’ ಬಳಸಲು ಹೊಸ ಖಾತೆ ತೆರೆಯಬೇಕಾಗಿಲ್ಲ. ನೋಂದಾಯಿಸಿಕೊಳ್ಳುವುದೂ ಬೇಡ. ನಿಮಗೊಂದು ಜಿಮೇಲ್ ಖಾತೆ ಇದ್ದರೆ ಸಾಕು. ‘ಬಝ್’ ತಾನಾಗಿಯೇ ಪರಿಷ್ಕೃತಗೊಂಡಿರುತ್ತದೆ. ಈಗಾಗಲೇ ನಿಮ್ಮ ಇಮೇಲ್ ಪಟ್ಟಿಯಲ್ಲಿರುವ ಜಿಮೇಲ್ ಬಳಕೆದಾರರೆಲ್ಲ ‘ಬಝ್’ನಲ್ಲಿ ನಿಮ್ಮ ಹಿಂಬಾಲಕರಾಗಿರುತ್ತಾರೆ. ಅಥವಾ ನೀವೇ ಅವರ ಹಿಂಬಾಲಕರಾಗಬಹುದು. ನಂತರ ನಿಮ್ಮ ತಲೆಯಲ್ಲಿ ಹುಟ್ಟುವ ಅಸಾಧಾರಣ ಆಲೋಚನೆಗಳನ್ನು ಇಲ್ಲಿ ಬರೆಯುತ್ತಾ ಹೋಗಬಹುದು. ಬರೆಯುವುದು ಬೇಸರವಾದರೆ ಚಿತ್ರ, ದೃಶ್ಯ ತುಣುಕುಗಳನ್ನು ಸೇರಿಸಬಹುದು. ಆದೂ ಬೇಸರವಾದರೆ, ನಿಮ್ಮ ಸ್ನೇಹಿತರು, ಅವರ ಸ್ನೇಹಿತರು ಈಗಾಗಲೇ ‘ಬಝ್’ನಲ್ಲಿ ಏನೇನು ಬರೆದುಕೊಳ್ಳುತ್ತಿದ್ದಾರೆ, ಯಾರು ಯಾರ ಕಾಲೆಳೆಯುತ್ತಿದ್ದಾರೆ ಎನ್ನುವುದನ್ನು ನೋಡಿ ಖುಷಿಪಡಬಹುದು. ಇಂತಹ ‘ಬಝ್’ಗೆ ಅಮೆರಿಕದ ಮೌಂಟೇನ್‌ವ್ಯೆನಲ್ಲಿರುವ ಗೂಗಲ್ ಕಚೇರಿಯಲ್ಲಿ ಕಳೆದ ವಾರ ಚಾಲನೆ ನೀಡಲಾಗಿದೆ.

ಗೂಗಲ್ ಬಝ್ ಸೇವೆಯನ್ನು ಪ್ರಾರಂಭಿಸಿದ ಮುಖ್ಯ ಉದ್ದೇಶ ಫೇಸ್ ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ವೆಬ್ ತಾಣಗಳ ಪ್ರಾಬಲ್ಯ ಮುರಿಯಲು. ಮತ್ತೊಂದು ಮುಖ್ಯ ಕಾರಣ ಇಮೇಲ್ ಕ್ಷೇತ್ರದಲ್ಲಿ ಮೊದಲನೆಯ ಸ್ಥಾನಕ್ಕೇರಲು.


ಮೈಕ್ರೊಸಾಫ್ಟ್ ವಿಂಡೋಸ್‌ನ ಲೈವ್ ಹಾಟ್‌ಮೇಲ್ ಮತ್ತು ಯಾಹೂ ಕಂಪೆನಿಯ ಯಾಹೂ ಮೇಲ್‌ಗಳು ಇಮೇಲ್ ಕ್ಷೇತ್ರದಲ್ಲಿ ಮೊದಲನೆಯ ಹಾಗೂ ಎರಡನೇ ಸ್ಥಾನದಲ್ಲಿವೆ. ಕಳೆದ ವರ್ಷಾಂತ್ಯಕ್ಕೆ ಜಿಮೇಲ್ 176.5 ದಶಲಕ್ಷ ಗ್ರಾಹಕರನ್ನು ಹೊಂದಿದ್ದರೆ, ಆ ಅವಧಿಯಲ್ಲಿ ಹಾಟ್‌ಮೇಲ್ ಮತ್ತು ಯಾಹೂ ಕ್ರಮವಾಗಿ 369.2 ದಶಲಕ್ಷ ಹಾಗೂ 303.7 ದಶಲಕ್ಷ ಗ್ರಾಹಕರನ್ನು ಹೊಂದುವ ಮೂಲಕ ಇಮೇಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿತ್ತು.

ಹಾಗೆ ನೋಡಿದರೆ ಗೂಗಲ್ ‘ಆರ್ಕುಟ್’ ಸಾಮಾಜಿಕ ಸಂವಹನ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ವೆಬ್ ತಾಣಗಳ ಬಗ್ಗೆ ಮಾಹಿತಿ ನೀಡುವ ಬಳಕೆದಾರ ತಾನೂ ಮಾಹಿತಿ ಸೇರಿಸಬಹುದಾದ ಗೂಗಲ್ ಸೈಡ್‌ವಿಕಿ (Sidewiki) ಕೂಡ ಬಳಕೆಯಲ್ಲಿದೆ.

ಆದರೆ, ಏನು ಮಾಡಿದರೂ, ತನ್ನ ಗ್ರಾಹಕ ಜಿಮೇಲ್ ಚಾಟಿಂಗ್ ಮತ್ತು ಆರ್ಕುಟ್ ಬಳಸುವುದಕ್ಕಿಂತ ಹೆಚ್ಚಾಗಿ ಟ್ವಿಟರ್‌ನಲ್ಲಿ ಹೆಚ್ಚು ಟ್ವೀಟ್ ಮಾಡತೊಡಗಿದಾಗ, ಫೇಸ್‌ಬುಕ್‌ನಲ್ಲಿ ಸಕ್ರಿಯರಾದಾಗ ಗೂಗಲ್ ತಲೆಗೆ ಹೊಳೆದದ್ದೇ ‘ಬಝ್’ ಐಡಿಯಾ. ‘ಬಝ್’ ಬಂದಿರುವುದೇ ಉಳಿದ ಸಾಮಾಜಿಕ ತಾಣಗಳ ಮೇಲೆ ಯುದ್ಧ ಸಾರಲು ಎನ್ನುತ್ತಾರೆ ಪ್ರಮುಖ ತಾಂತ್ರಿಕ ಕನ್ಸಲ್ಟಿಂಗ್ ಕಂಪನಿಯೊಂದರ ವ್ಯವಸ್ಥಾಪಕ ಜೆರ್ಮಿ ವೊವಾಂಗ್.

‘ಬಝ್’ನ ವಿಶೇಷತೆಯೆಂದರೆ ನೀವು ಈಗಾಗಲೇ ಫೇಸ್ ಬುಕ್, ಟ್ವಿಟರ್, ಪಿಕಾಸಾ, ಗೂಗಲ್ ರೀಡರ್, ಯೂಟ್ಯೂಬ್ ಮತ್ತು ಬ್ಲಾಗ್ ಬಳಸುತ್ತಿದ್ದರೆ ಅದರ ಸಂಪರ್ಕವನ್ನು ‘ಬಝ್’ನಲ್ಲಿ ಪಡೆದುಕೊಳ್ಳಬಹುದು. ಉಳಿದ ಸಾಮಾಜಿಕ ವೆಬ್ ತಾಣಗಳಲ್ಲಿ ಈ ಅವಕಾಶ ಇಲ್ಲ ಎನ್ನುವುದು ಬಝ್ ನ ಹಿರಿಮೆ. ಮೊಬೈಲ್‌ನಲ್ಲಿ ಕೂಡ ಬಝ್ ಸಂದೇಶಗಳನ್ನು ಪಡೆಯಲು ಅವಕಾಶವಿದೆ.

ಇಷ್ಟು ಮಾತ್ರವಲ್ಲ ಗೂಗಲ್ ಮ್ಯಾಪ್ ಸಹಾಯದಿಂದ ನಿಮ್ಮ ಹತ್ತಿರವಿರುವ ಸ್ನೇಹಿತರನ್ನೂ ಬಝ್ ನಲ್ಲಿ ಪತ್ತೆ ಹಚ್ಚಬಹುದು.
ಬಝ್ ಬಳಸಿದ ಉಳಿದ ಬಳಕೆದಾರರು ಏನು ಹೇಳುತ್ತಾರೆ ಗೊತ್ತಿಲ್ಲ. ಕನ್ನಡದ ಬಳಕೆದಾರರಂತೂ ಖುಷಿಯಾಗಿದ್ದಾರೆ. ಅವರ ಕೆಲವು ಬಝ್ ಗುಡುವಿಕೆಗಳು ಇಲ್ಲಿವೆ...

‘ನಮ್ಮ ಕ್ಷಣ ಕ್ಷಣದ ಆಲೋಚನೆಗಳು ನಮ್ಮ ತಲೆಯೊಳಗೆ ಇರಬೇಕೋ’? ಗೂಗಲ್ ಸರ್ವರ್‌ನಲ್ಲಿ ಇರಬೇಕೋ?

‘ನಮ್ಮ ಕ್ಷಣ ಕ್ಷಣದ ಆಲೋಚನೆಗಳು ನಮ್ಮ ತಲೆಯೊಳಗೆ ಇರಬೇಕು. ನಮ್ಮ ತಲೆಯ ತುಂಡು ಮಾತ್ರ ಗೂಗಲ್ ಸರ್ವರ್‌ನಲ್ಲಿರಬೇಕು’.

‘ನಮಗೆ ತಲೆ ಇಲ್ಲದಿದ್ದಲ್ಲಿ ಗೂಗಲ್‌ನಲ್ಲೂ, ಪೇಸ್‌ಬುಕ್‌ನಲ್ಲೋ ತಲೆ ಇಟ್ಟು ಯಾವಾಗ ಬೇಕೋ ಆವಾಗ ಟ್ವೀಟ್ ಮಾಡಬೇಕು’.

ಇದು ಏನೇ ಇರಲಿ. ಇತ್ತೀಚೆಗೆ ಯಾಕೋ ಈ ಸಾಮಾಜಿಕ ತಾಣಗಳ ಹಾವಳಿ ಸ್ವಲ್ಪ ಜಾಸ್ತಿ ಆಯಿತು ಅಂತ ಅನಿಸುತ್ತಿದೆ. ನಾಯಿಕೊಡೆಗಳಂತೆ ಹೊಸ ಹೊಸ ತಾಣಗಳು ಹುಟ್ಟಿಕೊಳ್ಳುತ್ತಿವೆ. ಬಳಕೆದಾರರಿಗೇನೂ ಕೊರತೆಯಿಲ್ಲ. ಆದರೆ ಸಾಮಾಜಿಕ ತಾಣಗಳಿಗೆ ಸದಸ್ಯರಾಗುವುದು ಎಂದರೆ ಸಂತೆಯಲ್ಲಿ ಬಟ್ಟೆ ಬಿಚ್ಚಿ ನಿಂತಂತೆ
Share/Save/Bookmark

ಕನ್ನ!!!!



ಹುಡುಗಿ,

ನಿನ್ನ ಮರೆತೆನೆಂದರೂ ಮರೆಯಲಿ ಹ್ಯಾಂಗೆ,

ಮರೆಯಲು ಬಿಡುತ್ತಿಲ್ಲ ಈ ಕಣ್ಣೆರ ಹನಿಗಳು.

ಇವು ಕೇವಲ ಹನಿಗಳಲ್ಲ, ನನ್ನೀ ಹೃದಯದಾ ನೆತ್ತರು.

ಹುಡುಗಿ ನಿನ್ನ ಮರೆತೆನೆಂದರೂ ಮರೆಯಲಿ ಹ್ಯಾಂಗೆ

ನೀ ನನ್ನ ಹೃದಯಕ್ಕೆ ಹಾಕಿದ ಕನ್ನ!!!!
Share/Save/Bookmark

ಮೇಘ ಸ೦ದೇಶ


ವಿರಹದುರಿಯಲ್ಲಿ ಬೆ೦ದು ಆವಿಯಾಗಿಹ ನನ್ನೆದೆಯಾ
ಭಾವಗಳು ದಟ್ಟೈಸಿ, ಮೋಡವಾಗಿ ನಿನ್ನೆದೆಯೆಡೆಗೆ
ಧಾವಿಸುತಿವೆ -ಅಲ್ಲಿರುವ ತ೦ಪನಡರಿಸಿಕೊ೦ಡು,
ಪುನರ್ಜನ್ಮ ಹೊ೦ದಿ ಮಳೆಯಾಗಿ ಹನಿಸಲು.
ಹಿಡಿದುಕೋ ಗೆಳತಿ... ಮಳೆಗರೆಯಿಸಿಕೋ......

-ಒ೦ಚೂರು ಅದು! ಇದು!
Share/Save/Bookmark

Understaning

ಮದುವೆಯಾಗುವ ಮೊದಲು ಪ್ರೀತಿಸುವ ಹುಡುಗಿ/ಹುಡುಗನನ್ನ ಅರ್ಥ ಮಾಡಿಕೊಳ್ಳಬೇಕು.
ಆದರೆ ಅರ್ಥ ಮಾಡಿಕೊಂಡ ಹುಡುಗಿ/ಹುಡುಗನನ್ನ ಮದುವೆಯಾಗದಿದ್ದರೆ, ಅರ್ಥ ಮಾಡಿಕೊಂಡಿದ್ದು ವೇಸ್ಟ್ ಆಗಿಬಿಡುತ್ತದೆ.

-Worldpress
Share/Save/Bookmark

Bank

ಕ್ಯಾಶ್ ಕೌಂಟರಿನ
ಚೆಲುವೆಯ
ಸೌಂದರ್ಯದತ್ತ
ಹರಿದು ನೋಟ,
ಗಮನಿಸಲಿಲ್ಲ
ಅವಳು ಕೊಟ್ಟ
ಹರಿದ ನೋಟ!

DRD
Share/Save/Bookmark

ಉತ್ತರ ಕೊಟ್ಟು ಹೊರಡು ............................

ಕಾಲ ನಿಂತಲ್ಲಿ ನಿಲ್ಲದು
ನನ್ನ ಒಂಟಿಯಾಗಿ ಬಿಟ್ಟು
ಜೊತೆಗೆ ಬರಿ ನೆನಪು ಮಾತ್ರವಾಗಿ .....
ನೀನು ಇಂದಲ್ಲ ನಾಳೆ
ಒಂದೊಂದೇ ಹೆಜ್ಜೆ
ಮುಂದೆ ಮುಂದೆ ಇಟ್ಟು....
ನನ್ನ ಎದೆಯ ಚಿತೆಗೆ
ನೋವಿನ ಬೆಂಕಿ ಕೊಟ್ಟು
ಕೇವಲ ನೆನಪಾಗುವೆ ....
ಹಳೆಯ ಗುಂಗಾಗುವೆ ....
ಎದೆಯ ಗುನುಗಾಗುವೆ .......
ನೀನು ....
ಕಾಲದ ಜೊತೆಗೆ
ರಾಜಿಯಗುವೆ ..
ಬದುಕಿನ ಒಂದು
ಘಟನೆಯಗುವೆ ...
ನಿನ್ನ ನೆನಪಲ್ಲಿ ಸುಟ್ಟ ನಿದ್ದೆಗಳ
ಸುತ್ತಿಟ್ಟ ಕನಸುಗಳ
ಸಾವಿರ ರಾತ್ರಿಗಳೆಲ್ಲ
ರಾತ್ರಿಗಳೆಲ್ಲ
ಮತ್ತೆ ಮತ್ತೆ ನೆನಪುಕ್ಕಿಸಿ
ನೋವಿನ ತೆರೆಗಳಾಗುತ್ತವೆ....
ನಾನಾಗ
ಒಳಮನದ ಪಡಸಾಲೆಯಲ್ಲಿ
ಒಂಟಿಯಾಗಿ ರೂದಿಸುತ್ತೆನ?
ಗೊತ್ತಿಲ್ಲ ....
ಕೇವಲ ವೆದನೆಗಳೇ ನನ್ನ
ಜೊತೆಗಾರರಾಗುವ ಹೊತ್ತು
ನಿದ್ದೆ ಸುಳಿಯದ ರಾತ್ರಿಗಳಲ್ಲಿ
ನನ್ನ ಕಿವಿಗೆ
ಮುತ್ತಿಕ್ಕಲು
ನಿನ್ನ ದ್ವನಿಗಳು ಕಾಯಲಾರವೊ...
ನೀನು ಮಗ್ಗುಲು ಬದಲಿಸುವಾಗಿನ
ಒಂದೇ ಒಂದು ನಿಟ್ಟುಸಿರೂ ಕೊಡ
ನನಗೆ ಕೆಳಿಸುವೊದಿಲ್ಲ
ಆಗ ........
ನಿನ್ನೆಲ್ಲ ಕ್ಷಣಗಳನ್ನ ನೀನು
ನನ್ನ ಜೊತೆ ಹಂಚಿಕೊಲ್ಲುವೊದಿಲ್ಲ...
ಅವೆಲ್ಲ ನೋವಿನ
ನೀರವ ರಾತ್ರೆಗಳು ..
ಒಬ್ಬಂಟಿಯ
ವಿರಹದ
ಜಾತ್ರೆಗಳು .....!!
ಒಹ್ .....ನನ್ನವಳೇ
ಆ .. ವೆಳೆಯಾದಾಗ
ನೀನು
ಇದುವರೆಗೂ ಇದ್ದು
ಈಗ ನಿಂತ ಮಳೆಯಂತೆ
ಎದ್ದು ನಡೆದೇ ಬಿಡುವೆ ...
ಅಪೂರ್ಣ ಚಿತ್ರವಾಗುವೆ
ಬರೆಯದೇ ಉಳಿದ ಕವಿಥೆಯಾಗುವೆ
ಬಿಟ್ಟೂ ಬಿಡದ ವ್ಯಥೆಯಾಗುವೆ ..
ನಾನು ಇಲ್ಲೇ
ಮತ್ತೆ ಮತ್ತೆ ತಬ್ಬಲಿ
ಆಗ ಇನ್ಯಾರನ್ನ
ತಬ್ಬಲಿ ?????????!!!
ಯಾರ ಹಾಡನ್ನ ಕೇಳಲಿ ??????!
ನಾನ್ಯರಿಗೆ ಕಿವಿಯಾಗಲೀ ????????!!
ಎಂದಾದರೊಂದು ದಿನ
ಹೋಗಿಯೇ ಬಿಡುವವಳೇ
ಹೋಗುವ ಮೊದಲು
ಇವಕ್ಕೆಲ್ಲ ಉತ್ತರ ಕೊಟ್ಟು ಹೊರಡು .....

Share/Save/Bookmark