
ನಿನ್ನ ನೋಡಿದ ಆ ಕ್ಷಣ,
ಕಣ್ಣಂಚಿನ ಮಿಂಚಿನಲಿ ಮರೆತೆ ನಾ ನನ್ನ.
ಬಿದಿಗೆ ಚಂದ್ರಮನಂತಿದ್ದ ನಿನ್ನ ಮೊಗ,
ಸಿಹಿ ಜೇನಿಂದ ತುಂಬಿಕೊಂಡ ನಿನ್ನ ತುಟಿ
ಬೇಡವೆಂದರೂ ಕೆನ್ನೆಗೆ ಮುತ್ತಿಡುವ ಮುಂಗುರುಳು
ನನ್ನ ಹೃದಯವನ್ನು ಎಲ್ಲಿಗೋ ಸೆಳೆಯುತ್ತಿದೆ.
ಮುಂಜಾನೆಯ ಕನಸಿನಲ್ಲಿ
ಮುಸ್ಸಂಜೆಯ ಮುನಿಸಿನಲ್ಲಿ
ನೀನೆ ತುಂಬಿರುವೆ.
ಮನಸ್ಸಿನ ಈ ತುಡಿತ
ಹೃದಯದ ಈ ಮಿಡಿತ
ನಿನಗಾಗಿ ನಿನ್ನ ಪ್ರೀತಿಗಾಗಿ
ನಿನ್ನ ಒಂದು ಮಾತಿಗಾಗಿ
ಬೊಗಸೆಯಷ್ಟು ಪ್ರೀತಿಗಾಗಿ
ಕಾಯುತಿದೆ ನನ್ನೀ ಮನ.
ನಿನ್ನ ಒಂದು ಮಾತು ಸಾಕು
ನನ್ನ ಮನವು ಅರಳಲು.
ನಿನ್ನ ಒಂದು ನೋಟ ಸಾಕು
ನನ್ನ ಬದುಕು ಬೆಳಗಲು.
ನನ್ನ ಹೃದಯದ ತುಂಬೆಲ್ಲ
ನೀನೆ ತುಂಬಿರುವೆ
ನೀನಿಲ್ಲದ ಈ ಬದುಕು
ಬರೀ ಶೂನ್ಯ......
-ಕಾವ್ಯ ಹೆಗಡೆ

No comments:
Post a Comment